ಮಂಗಳೂರು : ಮನೆಗೆ ತಡೆಗೋಡೆ ಕುಸಿದಿರುವ ಘಟನೆ ಆಂಬ್ಲಮೊಗರು ಗ್ರಾಮದ ತಿಲಕ್ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಮನೆ ಮಂದಿ ಪವಾಡ ಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ. ಗಿರಿಜ ಎಂಬವರಿಗೆ ಸೇರಿದ ಮನೆಯ ತಡೆಗೋಡೆ ಕುಸಿದಿದ್ದು, ಇದರ ಪಕ್ಕದಲ್ಲಿ ಕೆಳಗಿನ ಭಾಗದಲ್ಲಿದ್ದ ಮನೆಗೆ ಹಾನಿಯಾಗಿದೆ. ಅಲ್ಲದೆ, ಗಿರಿಜ ಅವರಿಗೆ ಸೇರಿದ ಮನೆಯೂ ಕೂಡ ಅಪಾಯದಲ್ಲಿದೆ.
ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅಪಾಯದಲ್ಲಿದ್ದ ರಿಯಾಝ್ ಎಂಬವರ ಮನೆ ಮಂದಿಯನ್ನು ತಕ್ಷಣ ಸ್ಥಳಾಂತರ ಮಾಡಲಾಗಿದೆ.
Follow us on Social media