ಮಂಗಳೂರು : ರಾಜ್ಯ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಪದೋನ್ನತಿ ಮಾಡಿ ಆದೇಶ ಹೊರಡಿಸಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಆಯುಕ್ತ ಹರಿರಾಂ ಶಂಕರ್ ಅವರನ್ನು ಹಾಸನ ಜಿಲ್ಲಾ ಎಸ್ಪಿಯಾಗಿ ಪದೋನ್ನತಿಗೊಳಿಸಿ ನೇಮಕಗೊಳಿಸಲಾಗಿದೆ. ಈ ಹಿಂದೆ ಹಾಸನ ಎಸ್ಪಿಯಾಗಿದ್ದ ಆರ್.ಶ್ರೀನಿವಾಸ ಗೌಡ ಅವರನ್ನು ವರ್ಗಾಯಿಸಲಾಗಿದೆ.ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ಹುಮ್ನಾಬಾದ್ನ ಎಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಉಳಿದಂತೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಅವರನ್ನು ಬೆಳಗಾವಿ ಎಸ್ಪಿಯಾಗಿ, ಶ್ರೀನಾಥ್ ಮಹಾದೇವ್ ಜೋಶಿ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ, ಸಿ.ಕೆ.ಬಾಬಾ ಅವರನ್ನು ಆಗ್ನೇಯ ವಿಭಾಗ ಡಿಸಿಪಿಯಾಗಿ, ಕಲಾ ಕೃಷ್ಣಸ್ವಾಮಿಯವರನ್ನು ಪೂರ್ವ ಸಂಚಾರಿ ವಿಭಾಗ ಡಿಸಿಪಿಯಾಗಿ, ಹರೀಶ್ ಪಾಂಡೇಯವರನ್ನು ಎಸಿಬಿ ಎಸ್ಪಿಯಾಗಿ ಲಕ್ಷ್ಮಣ್ ನಿಂಬರಗಿ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಸೇರಿದಂತೆ ಹಲವರನ್ನು ವರ್ಗಾವಣೆ ಮಾಡಲಾಗಿದೆ.
Follow us on Social media