ಮಂಗಳೂರು: ಬಾಲಕನೊಬ್ಬನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಮುಖಂಡ ಸಹಿತ ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ಯಾನ ನಿವಾಸಿ, ಭಜರಂಗದಳದ ಮುಖಂಡ ದಿನೇಶ್ ಹಾಗೂ ಕೊಳ್ನಾಡು ಗ್ರಾಮದ 16 ವರ್ಷ ಪ್ರಾಯದ ಇಬ್ಬರು ಮತ್ತು ಕನ್ಯಾನ ಗ್ರಾಮದ 17 ವರ್ಷ ಪ್ರಾಯದ ಓರ್ವ ಹಲ್ಲೆ ನಡೆಸಿರುವ ಆರೋಪಿಗಳು.
ಏಪ್ರಿಲ್ 21ರಂದು 11 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ಬಾಲಕನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಲ್ಲದೆ ಮೋಟಾರು ಸೈಕಲಿನಲ್ಲಿ ಕುಳ್ಳಿರಿಸಿ ಕಾಡುಮಠ ಪ್ರೌಢ ಶಾಲೆಯ ಮೈದಾನಕ್ಕೆ ಕರೆದುಕೊಂದು ಹೋಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ಜೈ ಶ್ರೀರಾಮ್ ಹೇಳುವಂತೆ ಬಲವಂತ ಪಡಿಸಿರುವುದಲ್ಲದೆ ಬಾಲಕನ ಬಳಿ ಇದ್ದ ಹಣವನ್ನು ದೋಚಿದ್ದಾರೆ ಎಂದು ಬಾಲಕ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
Source : UNI
Follow us on Social media