ಮಂಗಳೂರು: ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976ರ ಕಲಂ 343, 353ರ ಪ್ರಕಾರ ಮಾರ್ಚ್ ಮಾಹೆಯ ಅಂತ್ಯದೊಳಗೆ ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ನವೀಕರಣ ಮಾಡಿಸಬೇಕು. ನಂತರದ ಪರವಾನಿಗೆಗೆ ಯಾವುದೇ ಮಾನ್ಯತೆ ಇರುವುದಿಲ್ಲ.
ಉದ್ದಿಮೆದಾರರಿಗೆ ಹೊಸದಾಗಿ ಪರವಾನಿಗೆ ಪಡೆಯಲು ಮತ್ತು ನವೀಕರಿಸಲು ಅನುಕೂಲವಾಗುವಂತೆ ಉದ್ದಿಮೆ ಪರವಾನಿಗೆಯ ಆನ್‍ಲೈನ್ ಸಾಫ್ಟ್‌ವೇರ್ ಸಿಸ್ಟಮ್ ಆಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
2022-23ನೇ ಸಾಲಿನಲ್ಲಿ ಒಟ್ಟು 17,119 ಉದ್ದಿಮೆ ಪರವಾನಿಗೆ ನವೀಕರಣಗೊಂಡಿರುತ್ತದೆ. ಉಳಿದ ಎಲ್ಲಾ ಉದ್ದಿಮೆದಾರರು ಅನಧಿಕೃತವಾಗಿ ಉದ್ದಿಮೆ ನಡೆಸುತ್ತಿರುವ ಬಗ್ಗೆ ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಇದರಿಂದ ಪಾಲಿಕೆಗೆ ಆರ್ಥಿಕ ನಷ್ಟವೂ ಉಂಟಾಗುತ್ತಿದೆ,
ಆದ ಕಾರಣ ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ದಿಮೆದಾರರು ಇದೇ ಜೂನ್ 30 ರೊಳಗೆ ಕಡ್ಡಾಯವಾಗಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ನವೀಕರಿಸಲು ಅಂತಿಮ ಅವಕಾಶ ನೀಡಲಾಗಿದೆ. ತಪ್ಪಿದಲ್ಲಿ ಎಲ್ಲಾ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಲಾಗುವುದು.
ಉದ್ದಿಮೆ ಪರವಾನಿಗೆ ಇಲ್ಲದೆ ಉದ್ದಿಮೆ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರತಲ್ಲಿ ಸಾರ್ವಜನಿಕರು ಪಾಲಿಕೆಯ ವಾಟ್ಸಪ್ ಸಂಖ್ಯೆ: 9449007722 ಅಥವಾ ಪಾಲಿಕೆಯ ಸಹಾಯಯವಾಣಿ ಸಂಖ್ಯೆ: 0824-2220306ಗೆ ಕರೆ ಮಾಡಿ ತಿಳಿಸಬಹುದು.
ಈ ಬಗ್ಗೆ ಪಾಲಿಕೆಯ ವತಿಯಿಂದ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow us on Social media