ಮಂಗಳೂರು : ದ.ಕ. ಜಿಲ್ಲೆಯ ಕೋವಿಡ್ ಆಸ್ಪತ್ರೆಯಿಂದ ಕೊರೊನಾ ಸೋಂಕಿತನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ. ಪುತ್ತೂರಿನ ದರ್ಬೆ ನಿವಾಸಿ ದೇವರಾಜು(18) ಪರಾರಿಯಾಗಿರುವ ಸೋಂಕಿತ ಯುವಕನಾಗಿದ್ದಾನೆ.
ಈ ಬಗ್ಗೆ ಇಲಾಖೆ ಅಧಿಕೃತ ಮಾಹಿತಿ ನೀಡಿದ್ದು, ಆತ ಪತ್ತೆಯಾಗಿದ್ದಲ್ಲಿ ತಕ್ಷಣ ಇಲಾಖೆಗೆ, ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಜುಲೈ 1ರಂದು ಆನಾರೋಗ್ಯ ಹಿನ್ನೆಲೆಯಲ್ಲಿ ಯುವ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಆತನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಆತನ ವರದಿ ರವಿವಾರ ಲಭ್ಯವಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ವೈದ್ಯರು ಹಾಗೂ ದಾದಿಯರ ಕಣ್ತಪ್ಪಿಸಿ ಆರೋಪಿ ಸೋಂಕಿತ ಪರಾರಿಯಾಗಿದ್ದಾನೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಸೋಂಕಿತ ಯುವಕನ ವಿರುದ್ಧ ಕೇಸು ದಾಖಲಾಗಿದೆ.
Follow us on Social media