ಉಳ್ಳಾಲ: ದನ ಕಳವು ಪ್ರಕರಣದ ಮೂವರು ಆರೋಪಿಗಳನ್ನು ಕೊಣಾಜೆ ನಾಟೆಕಲ್ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಕರೆತಂದ ಸಂದರ್ಭ ಓರ್ವ ಆರೋಪಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬನ್ನಟ್ಟಿ ಬಂಧಿಸಿದ ಘಟನೆ ಬುಧವಾರ ಸಂಭವಿಸಿದೆ.
ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಮುಹಮ್ಮದ್ ಮುಸ್ತಫಾ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಣಾಜೆ ಠಾಣೆ ಪೊಲೀಸ್ ಸಿಬ್ಬಂದಿ ಎಂ.ಬಿ ಅಸುಂಡಿ ಅವರು ಆರೋಪಿ ಮುಸ್ತಫಾನನ್ನ ಹಿಡಿದು ಕರ್ತವ್ಯ ಪ್ರಜ್ಞೆ ಮೆರೆದಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇಂದು ಬೆಳಗ್ಗೆ ಚೇಳೂರು ಚೆಕ್ ಪೋಸ್ಟ್ ಬಳಿ ಪಿಎಸ್‌ಐ ಯೋಗೇಶ್ವರ್ ಮತ್ತು ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ಮೆಲ್ಕಾರ್ ನಿಂದ ಸಜಿಪ ಕಡೆಗೆ ಹೋಗುತ್ತಿದ್ದ ಕಾರೊಂದನ್ನು ತಡೆದಿದ್ದಾರೆ.
ತಪಾಸಣೆ ನಡೆಸಿದಾಗ ಕಾರಿನಲ್ಲಿ ಒಂದು ದನದ ಕರುವನ್ನು ಸಾಗಿಸುತ್ತಿರುವುದು ಕಂಡು ಬಂದು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ಪಿ.ಸಿ.ಆರ್ ವಾಹನದಲ್ಲಿ ನಾಟೆಕಲ್ಲಿನ ಆರೋಗ್ಯ ಕೇಂದ್ರಕ್ಕೆ ಪೊಲೀಸರು ವೈದ್ಯಕೀಯ ತಪಾಸಣೆಗೆ ಕರೆ ತಂದಿದ್ದಾರೆ.
ಇದೇ ವೇಳೆ ಮುಸ್ತಫಾ ಎಂಬ ಆರೋಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಭಾರಿ ಎತ್ತರದ ಗುಡ್ಡ ಹಾರಿ ತಪ್ಪಿಸಲು ಯತ್ನಿಸಿದ್ದಾನೆ.
ಆದ್ರೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಎಂ.ಬಿ ಅಸುಂಡಿ ಯವರು ಆರೋಪಿಯನ್ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ಘಟನೆಯಲ್ಲಿ ಅಸುಂಡಿ ಅವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow us on Social media