Breaking News

ಮಂಗಳೂರು: ಕೂಲಿ ಕಾರ್ಮಿಕರಿಗೆ 2000 ರೂ. ಸಿಕ್ಕುವ ವದಂತಿ-ಸಾಮಾಜಿಕ ಅಂತರ ಮರೆತು ಗುಂಪು ಸೇರಿದ ನೂರಾರು ಮಂದಿ

ಮಂಗಳೂರು: ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಿ ತಮಗೆ 2,000 ರೂ. ನಗದು ನೀಡುತ್ತದೆ ಎಂದು  ಭಾವಿಸಿ ಲಾಕ್ ಡೌನ್, ಸಾಮಾಜಿಕ ಅಂತರದ ನಿಯಮಗಳನ್ನೆಲ್ಲಾ ಮರೆತು ನೂರಾರು ಜನ ಗುಂಪು ಗುಂಪಾಗಿ ನೆರೆದ ವಿಲಕ್ಷಣ ಘಟನೆ ಮಂಗಳುರಿನಲ್ಲಿ ನಡೆದಿದೆ. 

ಅದರಲ್ಲಿ ಬಹುತೇಕರು ದಿನಗೂಲಿ ಕಾರ್ಮಿಕರಾಗಿದ್ದು  ಕಾರ್ಮಿಕರ ವಿವರಗಳನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಮತ್ತು ತಲಾ 2,000 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಾರೆ ಎಂದು ವದಂತಿಯನ್ನು ನಂಬಿ  600 ರಿಂದ 700 ಜನರ ಗುಂಪು ಮಂಗಳೂರು ಕೂಳೂರಿನ ಖಾಸಗಿ ಕಟ್ಟಡಶ್ರೀ ದೇವಿ ಪ್ರಸಾದ್‌ನಲ್ಲಿ ಜಮಾಯಿಸಿತ್ತು. ಕಟ್ಟಡದಲ್ಲಿ ಸರದಿಯಲ್ಲಿ ನಿಂತಿದ್ದ ಜನರು ತಮ್ಮನ್ನು ಪ್ರಶ್ನಿಸಿದವರಿಗೆಲ್ಲಾ ಅದೇ ಉತ್ತರ ಕೊಟ್ಟಿದೆ.

ಆದರೆ ಹೀಗೆ ಹೇಳಿದವರು ಯಾರೆಂದು ಅಧಿಕಾರಿಗಳು ಕೇಳಲಾಗಿ ಅವರಲ್ಲಿ ಯಾರಿಗೂ ನಿಖರ ಉತ್ತರ ಹೇಳಲಾಗಲಿಲ್ಲ. ನೆರೆದಿದ್ದ ಎಲ್ಲರೂ ತಮ್ಮ ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 3.30 ರವರೆಗೆ ಈ ಸ್ಥಳದಲ್ಲಿ ಜಮಾಯಿಸಿದ್ದರು. ಬಹುತೇಕರು ದಿನಗೂಲಿಗಳಾಗಿದ್ದು ಜಿಲ್ಲಾಧಿಕಾರಿಗಳ ಕಚೇರಿಯಿಂದ ತಮಗೆ ಹೀಗೆ ಬರಲು ಆದೇಶವಾಗಿದೆ ಎಂದು ಹೇಳುತ್ತಿದ್ದರು. 

ಈ ಸಂಬಂಧ ಮಾಹಿತಿ ಪಡೆದ ಕಾರ್ಮಿಕಿಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಅವರ ವಾಹನ ಅಡ್ಡಗಟ್ಟಿ ಘೇರಾವ್ ಹಾಕಲಾಗಿದೆ. ಇತ್ತ ದಿನಗೂಲಿ ಕಾರ್ಮಿಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಕೆಲವರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. . ನಂತರ, ಜನಸಮೂಹವು ಚದುರಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಕಾರ್ಪೋರೇಟರ್ ಅಥವಾ ಮಂಗಳೂರು ನಗರ ನಿಗಮದ ಆಯುಕ್ತರಿಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಕೊರೋನಾವೈರಸ್ ರೋಗದ ವಿರುದ್ಧ ಹೋರಾಡಲು ಜಾರಿಯಲ್ಲಿರುವ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ಕ್ರಮವನ್ನು ಜನರು ಗುಂಪು ಸೇರಿ ಉಲ್ಲಂಘಿಸಿದ್ದರೆನ್ನುವುದು ನಿಜ 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×