ಮಂಗಳೂರು : ನಗರದಲ್ಲಿ ಪೊಲೀಸ್ ಆಯುಕ್ತರಾಗಿದ್ದ ಡಾ. ಪಿ.ಎಸ್. ಹರ್ಷಾ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಮಂಗಳೂರಿಗೆ ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ನೇಮಕಗೊಳಿಸಿ ಆದೇಶ ನೀಡಲಾಗಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲೇ ಸರಕಾರ ಆಡಳಿತಾತ್ಮಕ ಕ್ಷೇತ್ರದಲ್ಲಿ ಮೇಜರ್ ಸರ್ಜರಿ ನಡೆಸಿದೆ. ವಿಕಾಸ್ ಕುಮಾರ್ ವಿಕಾಸ್ ಈ ಹಿಂದೆ ನಕ್ಸಲ್ ನಿಗ್ರಹ ಪಡೆಯ ಡಿಐಜಿಪಿಯಾಗಿದ್ದರು. ಕಾರ್ಕಳದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವನ್ನು ಅವರು ಹೊಂದಿದ್ದಾರೆ.
ಇನ್ನು ಡಾ. ಹರ್ಷಾ ಅವರನ್ನು ಬೆಂಗಳೂರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿಐಜಿಯಾಗಿ ನೇಮಕಗೊಳಿಸಿ ಆದೇಶ ನೀಡಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸರಕಾದ ಮುಖ್ಯ ಕಾರ್ಯದರ್ಶಿ ನಾಗಪ್ಪ ಎಸ್. ಪಾಟೀಲ್ ಆದೇಶ ನೀಡಿದ್ದಾರೆ.
Follow us on Social media