ಮಂಗಳೂರು : ಮಂಗಳೂರಿನಲ್ಲಿ ಐವರು ವೈದ್ಯರಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ ಎಂದು ಶಂಕೆ ವ್ಯಕ್ತವಾಗಿದೆ.
ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಐವರು ವೈದ್ಯರಿಗೆ ಕೊರೊನಾ ದೃಡಪಟ್ಟ ಹಿನ್ನಲೆ 45 ವೈದ್ಯರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.
28 ವರ್ಷದ ಯುವ ವೈದ್ಯ, 28 ವರ್ಷದ ಇಬ್ಬರು ವೈದ್ಯೆಯರು, 27 ವರ್ಷದ ಇಬ್ಬರು ವೈದ್ಯೆಯರಿಗೆ ಕೊರೊನಾ ದೃಢಪಟ್ಟಿದೆ ಎನ್ನಲಾಗಿದೆ.
ಇನ್ನು ಪಾಸಿಟಿವ್ ಬಂದ ಎಲ್ಲಾ ವೈದ್ಯರು ನಗರದ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದವರು ಎಂದು ತಿಳಿದು ಬಂದಿದೆ. ನಗರದ ಫ್ಲ್ಯಾಟ್ ಒಂದರ ವೈದ್ಯರಿಗೆ ಪಾಸಿಟಿವ್ ಹಿನ್ನಲೆ, ಫ್ಲ್ಯಾಟ್ ಸೀಲ್ಡೌನ್ಗೆ ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ನಗರದ ಖಾಸಗಿ ಆಸ್ಪತ್ರೆಗೆ ಇತ್ತೀಚೆಗೆ ಬೇರೆ ಚಿಕಿತ್ಸೆಗಾಗಿ ಬಂದಿದ್ದ ರೋಗಿಗೆ ಪಾಸಿಟಿವ್ ಬಂದಿದ್ದು ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
Follow us on Social media