ಮಂಗಳೂರು : ತಂಡವೊಂದು ಮೂವರು ಯುವಕರ ಮೇಲೆ ತಲ್ವಾರ್ ದಾಳಿ ನಡೆಸಿದ ಪರಿಣಾಮ ಓರ್ವನ ಹತ್ಯೆ ನಡೆಸಿದ್ದು, ಮತ್ತಿಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಮೂಡಬಿದ್ರೆ ತಾಲೂಕಿನ ಕಟೀಲು ಸಮೀಪದ ಎಕ್ಕಾರು ದೇವರಗುಡ್ಡೆಯಲ್ಲಿ ತಲ್ವಾರ್ ದಾಳಿ ನಡೆದಿದ್ದು, ಪರಿಣಾಮ ಹತ್ಯೆಯಾದ ಯುವಕನನ್ನು ಮಂಗಳೂರಿನ ಮರಕಡ ನಿವಾಸಿ ಕೀರ್ತನ್(20) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ನಿತಿನ್(20), ಮಣೇಶ್(20) ಎಂದು ಗುರುತಿಸಲಾಗಿದೆ.
ಅಕ್ರಮ ಮರಳುಗಾರಿಕೆಯ ದ್ವೇಷದ ಹಿನ್ನಲೆಯಲ್ಲಿ ತಂಡದಿಂದ ದಾಳಿ ನಡೆಸಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಬಜಪೆ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Follow us on Social media