ಉಳ್ಳಾಲ : ಹತ್ತಿ ದಾಸ್ತಾನು ಗೋದಾಮು ಮತ್ತು ಹತ್ತಿ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿ ಘಟಕ ಭಾಗಶಃ ಸುಟ್ಟುಹೋದ ಘಟನೆ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನಲ್ಲಿರುವ ಗ್ರಾಮ ಪಂಚಾಯತ್ ಕಚೇರಿ ಬಳಿ ನಡೆದಿದೆ.
ಘಟನೆ ಮಂಗಳವಾರ ಸಂಜೆ ಸಂಭವಿದ್ದು, ಸುಮಾರು 8 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಉದ್ಯಮಿ ನೌಮಾನ್ ಅವರಿಗೆ ಸೇರಿದ ಕೋಡಿ ಎಂಟರ್ ಪ್ರೈಸಸ್ ಹತ್ತಿ ದಾಸ್ತಾನು ಹಾಗೂ ತಯಾರಿಕಾ ಕೇಂದ್ರ ಇದಾಗಿದೆ. ಬೆಂಕಿ ತಗುಲಿದ ತತ್‌ಕ್ಷಣ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಬಳಿಕ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಆಗಮಿಸಿತು. ಈ ವೇಳೆ ಗೋದಾಮು, ಯಂತ್ರಗಳು ಭಾಗಶಃ ಬೆಂಕಿಗೆ ಆಹುತಿಯಾಗಿದ್ದವು.
ಕೊಣಾಜೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media