ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಬಟ್ಟೆ ಆರ್ಡರ್ ಮಾಡಿದ ವ್ಯಕ್ತಿಯೋರ್ವರ ಖಾತೆಯಿಂದ 80,560 ರೂ.ಗಳನ್ನು ವರ್ಗಾಯಿಸಿಕೊಂಡಿರುವ ಕುರಿತು ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.22ರಂದು P7_allure ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವ್ಯಕ್ತಿಯೊಬ್ಬರು ಬಟ್ಟೆಯೊಂದನ್ನು ಆರ್ಡರ್ ಮಾಡಿದ್ದರು. ಹಲವು ದಿನ ಕಳೆದರೂ ಪಾರ್ಸೆಲ್ ಮನೆಗೆ ಬಂದಿರಲಿಲ್ಲ. ಎ.18ರಂದು ಬೆಳಗ್ಗೆ 10ಕ್ಕೆ ಅವರಿಗೆ 8371886720 ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ ಪಾರ್ಸೆಲ್ ಬರುತ್ತದೆ ಎಂದು ತಿಳಿಸಿದ್ದ.ಇನ್ನು ಮರುದಿನ ಬೆಳಗ್ಗೆ ದೂರುದಾರ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಪಾರ್ಸೆಲ್ ಟ್ರ್ಯಾಕ್ ಕಳುಹಿಸುವುದಾಗಿ ಹೇಳಿ https://q1x.26b.myftpupload.com/ ಲಿಂಕ್ ಕಳುಹಿಸಿದ್ದ. ವ್ಯಕ್ತಿ ಅದನ್ನು ಕ್ಲಿಕ್ ಮಾಡಿದ್ದರು.
ಅಂದು ಸಂಜೆ ಅವರ ಖಾತೆಯಿಂದ ಹಂತ ಹಂತವಾಗಿ 50,0000 ರೂ. ಮತ್ತು 30,560 ರೂ. ಸೇರಿದಂತೆ ಒಟ್ಟು 80,560 ರೂ. ಕಡಿತವಾಗಿದೆ.ಈ ಕುರಿತಾಗಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಅಪರಿಚಿತರು ಮೋಸದಿಂದ ಹಣ ವರ್ಗಾಯಿಸಿರುವುದು ತಿಳಿದಿದ್ದು, ಈ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media