ಮಂಗಳೂರು : ಮಂಗಳೂರಿನಲ್ಲಿ ನಡೆದ ಆಟೋ ಬಾಂಬ್ ಸ್ಪೋಟ ಪ್ರಕರಣದ ಹೊಸ ಹೊಸ ತೆರುವು ಪಡೆದುಕೊಳ್ಳುತ್ತಿದ್ದು, ಬಾಂಬ್ ಸ್ಪೋಟ ಮಾಡಲು ಬಂದಿದ್ದ ವ್ಯಕ್ತಿ ಶಾರೀಕ್ ಎಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಆತ ಮೈಸೂರಿನಿಂದ ಬಾಂಬ್ ತಯಾರಿಸಿ ತಂದಿದ್ದ ಎನ್ನಲಾಗಿದ್ದು, ಮೈಸೂರಿನಿಂದ ಬಸ್ ಮೂಲಕ ಮಂಗಳೂರು ತಲುಪಿದ್ದು, ಮಂಗಳೂರು ಹೊರವಲಯದ ಪಡೀಲ್ ನಲ್ಲಿ ಬಸ್ ಇಳಿದು ಪಂಪ್ ವೆಲ್ ಕಡೆ ನಡೆದಿದ್ದ ಎನ್ನಲಾಗಿದೆ.
ಇನ್ನು ಪಡೀಲ್ ನಲ್ಲಿ ಬಸ್ ಇಳಿದು ನಡೆದು ಕೊಂಡೇ ಪಂಪ್ ವೆಲ್ ನತ್ತ ಸಾಗಿದ್ದ ಶಂಕಿತ, ರಸ್ತೆ ಮದ್ಯೆ ಆಟೋ ಹತ್ತಿದ್ದು, 3 ಶರ್ಟ್ ಹಾಕಿ ಕೊಂಡು ಬಂದಿದ್ದ ಎಂದು ವರದಿಯಾಗಿದೆ.
ಆಟೋದಲ್ಲಿ ಅಚಾನಕ್ ಆಗಿ ಸ್ಪೋಟ ಸಂಭವಿಸಿ ಗಂಭೀರವಾಗಿ ಗಾಯಗೊಂಡಿರುವ ಶಂಕಿತ ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಶಿವಮೊಗ್ಗ ತುಂಗಾ ನದಿ ದಡದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ನಟೋರಿಯಸ್ ಕ್ರಿಮಿನಲ್ ಶಾರೀಕ್ ಎಂಬಾತನೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಮಾಡಿರುವುದು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
Follow us on Social media