ಮಂಗಳೂರು: ಅಡ್ಯಾರ್ ಗ್ರಾಮ ಪಂಚಾಯತಿ ಸದಸ್ಯ ಯಾಕೂಬ್ ಮೇಲೆ ನಿನ್ನೆ ಸಂಜೆ ದಾಳಿ ನಡೆದಿದ್ದು ಗಂಭೀರ ಗಾಯಗೊಂಡ ಅವರು ಹೈ ಲ್ಯಾಂಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ನಿನ್ನೆ ಸಂಜೆ ಅಡ್ಯಾರ್ ಸಮೀಪ ತಂಡವೊಂದು ಯಾಕೂಬ್ ಮೇಲೆ ದಾಳಿ ನಡೆಸಿದ್ದು ಯಾಕೂಬ್ ರಿಕ್ಷಾದಲ್ಲಿ ಹೈ ಲ್ಯಾಂಡ್ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯಾಕೂಬ್ ಅಡ್ಯಾರ್ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ.
ಇನ್ನು ಕೊಲೆಗೆ ವೈಯಕ್ತಿಕ ಹಾಗೂ ರಾಜಕೀಯ ಕಾರಣ ಎಂದು ಹೇಳಲಾಗುತ್ತಿದೆ.
Follow us on Social media