ಮಂಗಳೂರು : ಗೋಹತ್ಯೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಬಜ್ಪೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆನಂದ ಗೌಡ (52), ಮೋಹನ್ ಗೌಡ (49), ಮೊಹಮ್ಮದ್ ಜಮಾಲ್ (39), ಮೊಹಮ್ಮದ್ ಷರೀಫ್ (49) ಮತ್ತು ಮೊಹಮ್ಮದ್ ರಿಯಾಜ್ (30) ಎಂದು ಗುರುತಿಸಲಾಗಿದೆ.
ಬಜ್ಪೆ ಪಿಐ ಕುಸುಮಾದರ್, ಪಿಎಸ್ ಐ ಪೂವಪ್ಪ, ಕಮಲಾ, ಎಎಸ್ ಐ ರಾಮ ಪೂಜಾರಿ ಮತ್ತಿತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಬಂಧಿತರಿಂದ ಪಿಕ್ ಅಪ್ ವ್ಯಾನ್, ಜಾನುವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Follow us on Social media