ಮಂಗಳೂರು: ನಗರದಲ್ಲಿ ಮತ್ತೆ ಫ್ಲೈ ಓವರ್ ಗಳಿಗೆ ಹೆಸರಿಡುವ ಫ್ಲೆಕ್ಸ್ ವಾರ್ ಆರಂಭಗೊಂಡಿದೆ.
ತೊಕ್ಕೊಟ್ಟು ಫ್ಲೈ ಓವರ್ ಗೆ ವೀರ ರಾಣಿ ಅಬ್ಬಕ್ಕ ಸೇತುವೆ ಎಂದು ಬರೆಯಲಾಗಿದೆ. ಇನ್ನು ನಗರದ ಕೇಂದ್ರ ಮೈದಾನಕ್ಕೆ ಕೋಟಿ ಚೆನ್ನಯ ಮೈದಾನ ಎಂದು ನಾಮಕರಣ ಮಾಡಿ ಫ್ಲೆಕ್ಸ್ ಬ್ಯಾನರ್ ಹಾಕಲಾಗಿದೆ.
ಮಂಗಳವಾರ ಪಂಪ್ ವೆಲ್ ಸೇತುವೆಗೆ ಸಾವರ್ಕರ್ ಹೆಸರು ಬರೆದು ಫ್ಲೆಕ್ಸ್ ಹಾಕಿದ್ದು ಇದೀಗ ಫ್ಲೆಕ್ಸ್ ವಾರ್ ಆರಂಭಗೊಂಡಿದೆ.
ಲಾಕ್ ಡೌನ್,ಕೊರೊನಾ ಹೋರಾಟದಲ್ಲಿ ಹೈರಾಣಾಗಿರುವ ಪೊಲೀಸರಿಗೆ ಫ್ಲೆಕ್ಸ್ ವಾರ್ ಮತ್ತೊಂದು ತಲೆಬಿಸಿಗೆ ಕಾರಣವಾಗಿದೆ.
Follow us on Social media