ಮಂಗಳೂರು : ದ.ಕ.ಜಿಲ್ಲೆಯಲ್ಲಿ ಕೊರೊನಾ ಸೊಂಕಿಗೆ ವೃದ್ದೆ ಸಾವನ್ನಪ್ಪಿದ್ದು ಅಮೂಲಕ ಐದನೇ ಬಲಿಯಾಗಿದೆ.
ಮಂಗಳೂರಿನ ಕುಲಶೇಖರ ನಿವಾಸಿ 80 ವರ್ಷದ P-507 ವೃದ್ದೆ ಇಂದು ಸಾವನ್ನಪ್ಪಿದ್ದಾರೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ವೃದ್ದೆಗೆ ಕೊರೊನಾ ಸೊಂಕು ತಗಲಿತ್ತು. ಅಬಳಿಕ ಇವರನ್ನು ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲು ದಾಖಲಿಸಲಾಗಿತ್ತು.
ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ
ಆಸ್ಪತ್ರೆಯಲ್ಲಿದ್ದ ತಾಯಿ ಮತ್ತು ಮಗ ಇಬ್ಬರಿಗೂ ಕೊರೋನಾ ಪಾಸಿಟಿವ್ ಆಗಿತ್ತು.
Follow us on Social media