ಮಂಗಳೂರು: ಕೇರಳಿಗರು ಪ್ರತಿನಿತ್ಯ ಮಂಗಳೂರು ಪ್ರಯಾಣಿಸುವುದಕ್ಕೆ ಕೇರಳ ಸರ್ಕಾರ ನಿಷೇಧ ಹೇರಿದೆ. ಮಂಗಳೂರು ಪ್ರವೇಶಕ್ಕೆ ಕೇರಳದಿಂದ ಕೊಡುತ್ತಿದ್ದ ನಿತ್ಯದ ಪಾಸ್ ರದ್ದು ಮಾಡಿದೆ. ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ಕೇರಳದ ಕಾಸರಗೋಡು, ಮಂಜೇಶ್ವರ ಭಾಗದಿಂದ ಮಂಗಳೂರಿಗೆ ಬರುತ್ತಿದ್ದ ಜನರು, ಉದ್ಯೋಗ ಮತ್ತು ವ್ಯಾಪಾರದ ಹಿನ್ನೆಲೆ ನಿತ್ಯದ ಪಾಸ್ ಬಳಸಿ ಪ್ರಯಾಣ ಮಾಡುತ್ತಿದ್ದರು. ಹಾಗೇ ಮಂಗಳೂರಿಗೆ ಬಂದು ಹೋದ ಐದು ಮಂದಿ ಕೇರಳಿಗರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಇನ್ನು ಮುಂದೆ ತಿಂಗಳಿಗೊಮ್ಮೆ ಮಾತ್ರ ಮಂಗಳೂರಿಗೆ ಪ್ರಯಾಣಿಸಬಹುದು. ಅಥವಾ ಮಂಗಳೂರಿನಲ್ಲೇ ಉಳಿದುಕೊಂಡು 28 ದಿನಕ್ಕೊಮ್ಮೆ ಕೇರಳಕ್ಕೆ ಬಂದು ಹೋಗಬಹುದು ಎಂದು ಸರ್ಕಾರ ಹೇಳಿದೆ.