ನವದೆಹಲಿ : ಭೂ ಸ್ವಾಧೀನಪಡಿಸಿಕೊಂಡಾಗ ಸೂಕ್ತ ಪರಿಹಾರ ನೀಡದೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದೆ.
ಅಲ್ಲದೆ, ಪರಿಹಾರವನ್ನು ಪಾವತಿಸಿ ಐದು ವರ್ಷಗಳಲ್ಲಿ ಸ್ವಾಧೀನಪಡಿಸಿಕೊಳ್ಳದಿದ್ದಾಗ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
2013 ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 24 ರ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಒಟ್ಟಾರೆ ತೀರ್ಪಿನ ಉದ್ದೇಶವೇನೆಂದರೆ, ಇದರ ಲಾಭವು ಭೂಮಾಲೀಕರಿಗೆ, ಕೃಷಿಕರಿಗೆ ಸಿಗುವಂತಾಬೇಕು. ಮಧ್ಯವರ್ತಿಗಳ ಕೈಪಾಲಾಗಬಾರದು ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ.
ಪರಿಹಾರವನ್ನು ಸ್ವೀಕರಿಸಲು ನಿರಾಕರಿಸುವ ಭೂ ಮಾಲೀಕರು ಸ್ವಾಧೀನವನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದೂ ಸಹ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.
Source : UNI
Follow us on Social media