ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಕಂಪನಿಗಳು ಲಗ್ಗೆ ಇಟ್ಟಿದ್ದು, ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಸ್ಮಾರ್ಟ್ ಟಿವಿ ವಿಭಾಗದಲ್ಲೂ ಮುಂಚೂಣಿಯಲ್ಲಿದೆ.
ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಯ ಶೇ.27 ರಷ್ಟನ್ನು ಹೊಂದುವ ಮೂಲಕ ಶಿಯೋಮಿ ಸ್ಮಾರ್ಟ್ ಟಿವಿ ಮಾರಾಟದಲ್ಲಿ 2020 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ನಂ.1 ಆಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಶೇ.14 ರಷ್ಟು ಮಾರುಕಟ್ಟೆಯನ್ನು ವ್ಯಾಪಿಸಿರವ್ ಎಲ್ ಜಿ, ಶೇ.10 ರಷ್ಟು ಮಾರುಕಟ್ಟೆ ಹೊಂದಿರುವ ಸ್ಯಾಮ್ ಸಂಗ್, ಶೇ.9 ರೊಂದಿಗೆ ಸೋನಿ, ಶೇ.8 ರೊಂದಿಗೆ ಟಿಸಿಎಲ್ ಸಂಸ್ಥೆಗಳು ಅನುಕ್ರಮವಾಗಿವೆ ಎಂದು ಕೌಂಟರ್ ಪಾಯಿಂಟ್ ರಿಸರ್ಚ್ ವರದಿ ಮೂಲಕ ತಿಳಿದುಬಂದಿದೆ.
ಚೀನಾ ಹಾಗೂ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಈಗಾಗಲೇ ಶಿಯೋಮಿ ಆವರಿಸಿದ್ದು, ಮುಂಚೂಣಿಯಲ್ಲಿದೆ.
ಸ್ಮಾರ್ಟ್ ಫೋನ್ ತಯಾರಕರಿಗೆ ಸ್ಮಾರ್ಟ್ ಟಿವಿ ತಯಾರಿಸುವಷ್ಟು ತಾಂತ್ರಿಕ ನೈಪುಣ್ಯ ಇದೆ. ಆದ್ದರಿಂದ ಸ್ಮಾರ್ಟ್ ಫೋನ್ ತಯಾರಕರು ಸುಲಭವಾಗಿ ಸ್ಮಾರ್ಟ್ ಟಿವಿ ಮಾರುಕಟ್ಟೆಗೂ ಪ್ರವೇಶಿಸುತ್ತಿದ್ದಾರೆ ಎಂದು ಕೌಂಟರ್ ಪಾಯಿಂಟ್ ನ ರಿಸರ್ಚ್ ಅಸೋಸಿಯೇಟ್ ದೇಬಾಶಿಶ್ ಜಾನ ಹೇಳಿದ್ದಾರೆ.
ಉತ್ತರ ಅಮೆರಿಕ, ಯುರೋಪಿಯನ್ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಕಡಿಮೆ ಬೆಳೆದಿರುವ ಸ್ಮಾರ್ಟ್ ಟಿವಿ ಮಾರುಕಟ್ಟೆಯಾಗಿರುವ ಏಷ್ಯಾದ ಮಾರುಕಟ್ಟೆಗಳನ್ನು ಸ್ಮಾರ್ಟ್ ಫೋನ್ ತಯಾರಕರು ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಲಗ್ಗೆ ಇಡಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜಾಗತಿಕವಾಗಿ ಶಿಯೋಮಿ ಸಾರ್ಟ್ ಟಿವಿಯ ಶೇ.7 ರಷ್ಟು ಮಾರುಕಟ್ಟೆಯನ್ನು ಆವರಿಸಿ ಇದರ ಲಾಭ ಪಡೆಯಿತು. ಚೀನಾ ಹಾಗೂ ಭಾರತ, ಏಷ್ಯನ್ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್ ಟಿವಿ ಯಶಸ್ಸನ್ನು ಕಂಡು ಇತರ ಸ್ಮಾರ್ಟ್ ಫೋನ್ ತಯಾರಕರೂ ಸಹ ಸ್ಮಾರ್ಟ್ ಟಿವಿ ತಯಾರಿಗೆ ಮುಂದಾದರು.
ಮೋಟೋರೋಲಾ ಹಾಗೂ ನೋಕಿಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರ ಸೀಮಿತಗೊಂಡಿದ್ದು, ಸಧ್ಯದಲ್ಲಿ ಬೇರೆ ಮಾರುಕಟ್ಟೆಗಳನ್ನು ಪ್ರವೇಶಿಸುವ ಲಕ್ಷಣಗಳು ಕಾಣುತ್ತಿಲ್ಲ. ಈ ಬ್ರಾಂಡ್ ಗಳ ಪೈಕಿ ಬಹುತೇಕ ಬ್ರ್ಯಾಂಡ್ ಗಳು ಕಡಿಮೆ ದರದಲ್ಲಿ ಸ್ಮಾರ್ಟ್ ಟಿವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಮೊದಲ ಬಾರಿಗೆ ಸ್ಮಾರ್ಟ್ ಟಿವಿ ಖರೀದಿಸುತ್ತಿರುವವರು ಕೊಳ್ಳುತ್ತಿದ್ದಾರೆ.
ಇಷ್ಟೆಲ್ಲದರ ನಡುವೆಯೇ ಮತ್ತೊಂದು ಸ್ಮಾರ್ಟ್ ಫೋನ್ ಸಂಸ್ಥೆಯಾದ ಒನ್ ಪ್ಲಸ್ ಸಂಸ್ಥೆ ಭಾರತದಲ್ಲಿ ಸ್ಮಾರ್ಟ್ ಟಿವಿ ಪರಿಚಯಿಸುವುದಾಗಿ ಹೇಳಿದೆ.
ಇದೇ ವೇಳೆ ರಿಯಲ್ ಮೀ ಸ್ಮಾರ್ಟ್ ಟಿವಿ ವಿಭಾಗದಲ್ಲಿ ಉಳಿದ ಬ್ರಾಂಡ್ ಗಳಿಗೆ ಪೈಪೋಟಿ ನೀಡಲಿದೆ ಎನ್ನುತ್ತದೆ ಕೌಂಟರ್ ಪಾಯಿಂಟ್ ರಿಸರ್ಚ್ ಹೇಳಿದೆ. ಭಾರತದಲ್ಲಿ ಒಟಿಟಿ ಬಳಕೆ ಹೆಚ್ಚಾಗುತ್ತಿದ್ದು ಸ್ಮಾರ್ಟ್ ಟಿವಿ ಮಾರುಕಟ್ಟೆಯೂ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಯು, ಕೋಡಕ್, ಥಾಮ್ಸನ್ ಸಂಸ್ಥೆಗಳೂ ಉತ್ತಮವಾಗಿ ಮಾರಾಟವಾಗುತ್ತಿದೆ. ಉಳಿದಂತೆ ಜಾಗತಿಕವಾಗಿ ಸಾಂಪ್ರದಾಯಿಕ ಟಿವಿ ಬ್ರಾಂಡ್ ಗಳಾದ ಸ್ಯಾಮ್ ಸಂಗ್, ಎಲ್ ಜಿ, ಸೋನಿಗಳ ಬ್ರಾಂಡ್ ಜನಪ್ರಿಯತೆ ಅಬಾಧಿತವಾಗಿ ಮುಂದುವರೆದಿವೆ.
Follow us on Social media