ನವದೆಹಲಿ: ನಿರೀಕ್ಷೆಯಂತೆ ಟಿ20 ವಿಶ್ವ ಕಪ್ 7ನೇ ಆವೃತ್ತಿ(2021)ಯ ಆತಿಥ್ಯ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. 2023ರಲ್ಲಿ ಏಕದಿನ ವಿಶ್ವ ಕಪ್ ಕೂಡ ಭಾರತದಲ್ಲೇ ನಡೆಯಲಿದೆ.
2020ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವ ಕಪ್ 6ನೇ ಆವೃತ್ತಿ 2022ಕ್ಕೆ ಮುಂದೂಡಿಕೆಯಾಗಿದೆ. ಆ ಆವೃತ್ತಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಈ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ಆಸ್ಟ್ರೇಲಿಯಾದಲ್ಲಿ 6ನೇ ಆವೃತ್ತಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಪಿಡುಗಿನ ಭಯದಲ್ಲಿ ಮುಂದೂಡಿಕೆಯಾಗಿತ್ತು.
ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ಒಮ್ಮತದ ಅಭಿಪ್ರಾಯದ ಆಧಾರದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಶುಕ್ರವಾರದ ಸಭೆಯ ಬಳಿಕ ಐಸಿಸಿ ಮಂಡಳಿಯ ಸದಸ್ಯರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
Follow us on Social media