ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಶುಕ್ರವಾರ ಒಂದೇ ದಿನ 26,506 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,93,802ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ ಒಂದೇ ದಿನ 475 ಮಂದಿ ಕೊರೋನಾಗೆ ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ 21,604ಕ್ಕೆ ತಲುಪಿದೆ.
ಇನ್ನು 7,93,802 ಮಂದಿ ಸೋಂಕಿತರ ಪೈಕಿ 4,95,513 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 2,76,685 ಮಂದಿ ಸೋಂಕಿನಿಂದ ಬಳಲುತ್ತಿದ್ದಾರಂದು ತಿಳಿದುಬಂದಿದೆ.
ರಾಜ್ಯವಾರು ಮಹಾರಾಷ್ಟ್ರದಲ್ಲಿ 6,875 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2,30,599ಕ್ಕೆ ತಲುಪಿದೆ.
Follow us on Social media