ನವದೆಹಲಿ : ಮೇ.1 ಬಳಿಕ ನಿತ್ಯ 2000ಕ್ಕಿಂತ ಹೆಚ್ಚಿನ ಹೊಸ ಪ್ರಕರಣ ದಾಖಲಾಗುವ ಸಂಪ್ರದಾಯ ಮುಂದುವರೆದಿದ್ದು, ನಿನ್ನೆ ಒಂದೇ ದಿನ ದೇಶದಾದ್ಯಂತ 4037 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52,952ಕ್ಕೆ ತಲುಪಿದೆ.
ಜೊತೆಗೆ ಮತ್ತೆ 83 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ ಕೂಡ 1,783ಕ್ಕೆ ಏರಿಕೆಯಾಗಿದೆ. ಈ ನಡುವೆ 52,952 ಮಂದಿ ಸೋಂಕಿತರ ಪೈಕಿ 15,267 ಮಂದಿ ವೈರಸ್’ನಿಂದ ಗುಣಮುಖರಾಗಿದ್ದು, ಇದರೊಂದಿಗೆ ಗುಣಮುಖರಾಗುತ್ತಿರುವ ಶೇಕಡವಾರು 28.83ರಷ್ಟಿದೆ.
ದೇಶಗಲ್ಲಿಯೇ ಅತೀ ಹೆಚ್ಚು ಸೋಂಕಿತರು ಇರುವ ಮಹಾರಾಷ್ಟ್ರ ರಾಜ್ಯದಲ್ಲಿ ಗುರುವಾರ 1216 ಹೊಸ ಕೊರೋನಾ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 17,974ಕ್ಕೆ ತಲುಪಿದೆ. ಅಲ್ಲದೆ. ಧಾರಾವಿ, ಕೊಳಗೇರಿ ಪ್ರದೇಶಗಳಲ್ಲಿ ಗುರುವಾರ ಮತ್ತೆ 50 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 783ಕ್ಕೆ ತಲುಪಿದೆ.
ಇನ್ನು ತಮಿಳುನಾಡಿನಲ್ಲಿ 580, ದೆಹಲಿ 448, ಗುಜರಾತ್ ನಲ್ಲಿ 388, ಮಧ್ಯಪ್ರದೇಶದಲ್ಲಿ 114 ಹೊಸ ಪ್ರಕರಣಗಳು ದೃಢಪಟ್ಟಿವೆ.
ಮಹಾರಾಷ್ಚ್ರದ ಅತೀದೊಡ್ಡ ಜೈಲು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 72 ಕೈದಿಗಳು ಮತ್ತು 7 ಜೈಲಾಧಿಕಾರಿಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಜೈಲಿನ ಬಾಣಸಿಗರೊಬ್ಬರಿಂದ ಇವರೆಲ್ಲರಿಗೂ ಸೋಂಕು ತಗುಲಿದ್ದು ಖಚಿತಪಟ್ಟಿದೆ.
Follow us on Social media