ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2644 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 39980ಕ್ಕೇರಿಕೆಯಾಗಿದೆ.
ಇಲ್ಲಿಯವರೆಗೆ ದೇಶಾದ್ಯಂತ 10632 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 682 ರೋಗಿಗಳು ಚೇತರಿಕೆ ಕಂಡಿದ್ದಾರೆ. ಇದರಿಂದ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 26.59ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ನಡುವೆ, ಕೇಂದ್ರ ಆರೋಗ್ಯ ಸಚಿವ ಡ.ಹರ್ಷ ವರ್ಧನ್ , ಇಂದಿನವರೆಗೆ ದೇಶಾದ್ಯಂತ 10 ಲಕ್ಷ ಜನರ ತಪಾಸಣೆ ನಡೆಸಲಾಗಿದ್ದು, ಪ್ರತಿ ನಿತ್ಯ 74 ಸಾವಿರ ಟೆಸ್ಟ್ ಗಳನ್ನು ನಡೆಸಲಾಗುತ್ತಿದೆ.
ಸರ್ಕಾರ ದೇಶಾದ್ಯಂತ 20 ಲಕ್ಷ ಪಿಪಿಇ ಕಿಟ್ ಗಳನ್ನು ವಿತರಿಸಲಾಗಿದೆ ಮತ್ತು ವಿಶ್ವಾದ್ಯಂತ 100 ದೇಶಗಳಿಗೆ ಔಷಧ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜನರು ಮೇ 17ರವರೆಗೆ ಕೂಡ ಲಾಕ್ ಡೌನ್ ಅನ್ನು ಪಾಲಿಸಬೇಕು ಎಂದು ಹರ್ಷವರ್ಧನ್ ಜನರಿಗೆ ಮನವಿ ಮಾಡಿದ್ದಾರೆ.