ಬ್ರಹ್ಮಾವರ: ಇಲ್ಲಿನ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಶಾಖಾ ಕಛೇರಿಯನ್ನು ಸಿಲ್ ಡೌನ್ ಮಾಡಲಾಗಿದೆ.
ಬ್ರಹ್ಮಾವರ ಪೇಟೆಯ ಮಧುವನ ಕಾಂಪ್ಲೆಕ್ಸ್ನಲ್ಲಿ ಕಾರ್ಯಚರಿಸುವ ಎಲ್ಐಸಿಯ ಶಾಖೆಯ ಅಭಿವೃದ್ಧಿ ಅಧಿಕಾರಿಗೆ ಸೋಂಕು ತಗಲಿದ ಪರಿಣಾಮ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬ್ರಹ್ಮಾವರ ಪೊಲೀಸರ ಸಹಕಾರದೊಂದಿಗೆ ಗುರುವಾರ ಮದ್ಯಾಹ್ನ ಸಿಲ್ ಡೌನ ಮಾಡಿದ್ದಾರೆ.
ಇವರಿಗೆ ಯಾರ ಸಂಪರ್ಕದಿಂದ ಸೋಂಕು ತಗಲಿದೆಂದು ಇನ್ನಷ್ಟೇ ತಿಳಿದು ಬರಬೇಕಿದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Follow us on Social media