ಬ್ರಹ್ಮಾವರ : ಒಂಟಿಯಾಗಿ ವಾಸವಾಗಿರುವ ಕೊರಗಿನಲ್ಲಿ ಇಲಿ ಪಾಷಣ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಹಂದಾಡಿ ಗ್ರಾಮದ ಬೇಳೂರುಜೆಡ್ಡು ಎಂಬಲ್ಲಿ ನಡೆದಿದೆ.
ಮೃತರನ್ನು ಶೈಜು ಥೋಮಸ್ ಎಂಬವರ ಪತ್ನಿ ಬಿನ್ಸಿ (30) ಎಂದು ಗುರುತಿಸಲಾಗಿದೆ.
ಶೈಜು ಥೋಮಸ್ ದುಬೈಯಲ್ಲಿ ಉದ್ಯೋಗದಲ್ಲಿದ್ದು, ಬಿನ್ಸಿ ಮಗಳೊಂದಿಗೆ ಮನೆಯ ಒಂದನೇ ಮಹಡಿಯಲ್ಲಿ ಹಾಗೂ ಅವರ ಅತ್ತೆ, ಮಾವ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿದ್ದರು.
ಮೇಲಂತಸ್ತಿನಲ್ಲಿ ಮಗುವಿನೊಂದಿಗೆ ಒಂಟಿಯಾಗಿ ವಾಸವಾಗಿರುವ ಕೊರಗಿನಲ್ಲಿ ಬಿನ್ಸಿ ಅ.26ರಂದು ರಾತ್ರಿ ಡೆತ್‌ನೋಟ್ ಬರೆದಿಟ್ಟು ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು ನ.5ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media