ಬೈಂದೂರು : ಅತಿ ವೇಗದಲ್ಲಿ ಬೈಕ್ ಓಡಿಸುತ್ತಿದ್ದ 15 ವರ್ಷದ ಬಾಲಕ ಇಲ್ಲಿನ ಶಿರೂರು ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಫೆಬ್ರವರಿ 11 ರ ಗುರುವಾರ ನಡೆದಿದೆ.
ಮೃತ ಬಾಲಕನನ್ನು ಹಡವಿನಕೋಣೆ ನಿವಾಸಿ ಆರಾನ್ (15) ಎಂದು ಗುರುತಿಸಲಾಗಿದೆ.
ಆರಾನ್ ಕಳೆದ ವಾರ ಬೈಂದೂರಿನಲ್ಲಿ ಪರವಾನಗಿ ಇಲ್ಲದೆಯೇ ಬೈಕ್ ಚಲಾಯಿಸುತ್ತಿದ್ದ ಹಿನ್ನೆಲೆ ಪೊಲೀಸರು ದಂಡ ವಿಧಿಸಿದ್ದರು. ಅವರು ಬೈಕನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಎರಡು ದಿನಗಳ ಕಾಲ ವಶದಲ್ಲಿರಿಸಿದ್ದರು. ನಂತರ ಅವನ ತಾಯಿಯನ್ನು ಪೊಲೀಸ್ ಠಾಣೆಗೆ ಕರೆಸಿ ಕಾನೂನು ನಿಮಯಗಳನ್ನು ಪಾಲಿಸುವಂತೆ ಪೊಲೀಸರು ಸಲಹೆ ನೀಡಿದರು.
ಆದರೆ ಆರಾನ್ ಗುರುವಾರ ಮತ್ತೆ ಬೈಕು ಸವಾರಿ ಮಾಡಿದ್ದು ಅತಿ ವೇಗದಲ್ಲಿ ಸವಾರಿ ಮಾಡುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬೈಂದೂರು ಠಾಣಾಧಿಕಾರಿ ಸಂಗೀತಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media