ಲಕ್ನೋ : ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ದುರಂತ ಇನ್ನೂ ನಿಂತಿಲ್ಲ, ಎರಡು ಟ್ರಕ್ ಗಳು ಮುಖಾ ಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ 23 ವಲಸೆ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಬಳಿ ನಡೆದಿದೆ.
ರಾಜಸ್ತಾನದಿಂದ ಉತ್ತರ ಪ್ರದೇಶದಲ್ಲಿರುವ ತಮ್ಮ ನಿವಾಸಗಳಿಗೆ ವಲಸೆ ಕಾರ್ಮಿಕರು ಟ್ರಕ್ ನಲ್ಲಿ ತೆರಳುತ್ತಿದ್ದರು,
ಮುಂಜಾನೆ ಸುಮಾರು 3.30 ರ ವೇಳೆಗೆ ಅಪಘಾತ ಸಂಭವಿಸಿದ್ದು, 23 ಮಂದಿ ಸಾವನ್ನಪ್ಪಿ, ಸುಮಾರು 15ರಿಂದ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲಾ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದು ಬಂದಿದೆ.
Follow us on Social media