ಬೆಳ್ಮಣ್ : ಬೈಂದೂರಿನ ಬಾಲಕಿಯೋರ್ವಳಿಗೆ ವಿವಾಹವಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭವತಿಯಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಳ್ಮಣ್ ಪರಿಸರದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಜಯ (20) ಎಂದು ಗುರುತಿಸಲಾಗಿದೆ.
ವರ್ಷದ ಹಿಂದೆ ಬಾಲಕಿಯು ಬೆಳ್ಮಣ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದು ಈ ಸಂದರ್ಭದಲ್ಲಿ ಆರೋಪಿ ಆಕೆಯನ್ನು ತನ್ನ ಬಾಡಿಗ ಮನೆಗೆ ಕರೆದೊಯ್ದು ಪುಸಲಾಯಿಸಿ ದೈಹಿಕ ಸಂಪರ್ಕ ನಡೆಸಿದ್ದ.
ಹಾಗೆಯೇ ಕಳೆದ 2 ತಿಂಗಳುಗಳಿಂದ ಆತ ತನ್ನ ಬಾಡಿಗೆ ಮನೆಯಲ್ಲಿ ಬಾಲಕಿಯೊಂದಿಗೆ ವಾಸವಿದ್ದು ಆಕೆಗೆ ತಾಳಿ ಇರುವ ನೂಲನ್ನು ಕಟ್ಟಿ ವಿವಾಹವಾಗಿರುವುದಾಗಿ ನಂಬಿಸಿದ್ದಾನೆ.ಈ ಕುರಿತು ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media