ಬೆಳ್ಮಣ್ : ಕೆದಿಂಜೆಯಲ್ಲಿ ಕಾರ್ಯಚರಿಸುತ್ತಿರುವ ಗೇರು ಬೀಜ ಕಂಪನಿಯಲ್ಲಿ ಸುಮಾರು ೭ ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ನಂದಳಿಕೆ, ಬೆಳ್ಮಣ್, ಬೋಳ ಭಾಗದಿಂದ ಬರುವ ಸುಮಾರು ಐದುನೂರಕ್ಕೂ ಹೆಚ್ಚು ಜನ ಕೆಲಸ ನಿರ್ವಹಿಸುತ್ತಿದ್ದು ಇದೀಗ ಏಳು ಮಂದಿಯಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ.
ಕಂಪನಿಯ ಕೆಲಸದ ಏಳು ಮಂದಿಯಲ್ಲಿ ಪಾಸಿಟಿವ್ ವರದಿ ದೃಡಪಟ್ಟರೂ ಕೆಲವೊಂದು ಗೋಡಾನ್‌ಗಳನ್ನು ಮಾತ್ರ ಬಂದ್ ಮಾಡಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದು ಇಡೀ ಕಂಪನಿ ಸೀಲ್ ಡೌನ್‌ಗೊಂಡಿಲ್ಲ.
ಪಾಸಿಟಿವ್ ಬಂದ ಇಡೀ ಏರಿಯಾ ಸೀಲ್ ಡೌನ್‌ಗಳು ನಡೆಯುತ್ತಿದ್ದರೂ ಕಂಪನಿ ಯಾಕೆ ಸೀಲ್ ಡೌನ್ ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Follow us on Social media