ಬೆಳ್ತಂಗಡಿ : ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿರ್ಮನೊಟ್ಟು ಎಂಬಲ್ಲಿ ನ.2ರಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
- ಬಿರ್ಮನೊಟ್ಟು ಮನೆ ನಿವಾಸಿ ವಸಂತಗೌಡ ಎಂಬವರ ಪುತ್ರ ದಿನೇಶ್ ಗೌಡ(28) ನೇಣು ಬಿಗಿದುಕೊಂಡ ಯುವಕ.ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟ ಹೊಂದಿದ್ದ ಅವರ ಈ ಚಟವನ್ನು ಬಿಡಿಸಲು ಮನೆಯವರು ಪ್ರಯತ್ನಿಸುತ್ತಿದ್ದು, ಇದೇ ಕಾರಣಕ್ಕೆ ಮನನೊಂದು ದಿನೇಶ್ ಗೌಡ ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.ಮೃತ ಯುವಕನ ಪೋಷಕರು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.