ಬೆಳ್ತಂಗಡಿ : ಗುರುವಾರವೂ ಬೆಳ್ತಂಗಡಿ ಪೋಲಿಸರು ಗೋ ಕಳ್ಳನೊಬ್ಬನನ್ನು ಬಂಧಿಸಿ ಗೋವುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದು ವಾರದಲ್ಲಾದ ನಾಲ್ಕನೇ ಪ್ರಕರಣವಾಗಿದೆ.
ನಾವುರು ಗ್ರಾಮದ ಕೈಕಂಬ ಮನೆಯ ರಫೀಕ್(36) ಎಂಬಾತನೇ ಆರೋಪಿಯಾಗಿದ್ದಾನೆ.
ಈತ ಗುರುವಾರ ಬೆಳಿಗ್ಗೆ ಬೆದ್ರಬೆಟ್ಟು ಎಂಬಲ್ಲಿ ಯಾವುದೇ ಪರವಾನಿಗೆ ಯಾ ದಾಖಲಾತಿ ಪತ್ರಗಳನ್ನು ಹೊಂದದೆ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಪಿಕಪ್ ವಾಹನದಲ್ಲಿ ತುಂಬಿಸಿ ಕಿಲ್ಲೂರು ಕಡೆಯಿಂದ ಪಿಕಪ್ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿತನನ್ನು ವಶಕ್ಕೆ ಪಡೆದು ಆರೋಪಿತನು ಸಾಗಾಟ ಮಾಡುತ್ತಿದ್ದ ಕಂದು ಬಣ್ಣದ ಹಸು-1 ಹಾಗೂ ಕಂದು ಬಣ್ಣದ ಹೋರಿ ಕರು-1 ನ್ನು ಮತ್ತು ಸಾಗಾಟಕ್ಕೆ ಉಪಯೋಗಿಸಿದ ಪಿಕಪ್ ವಾಹನವನ್ನು ಸ್ವಾದೀನ ಪಡಿಸಿಕೊಂಡಿದ್ದು, ಜಾನುವಾರು ಹಾಗೂ ಪಿಕಪ್‌ನ ಒಟ್ಟು ಮೌಲ್ಯ ರೂ 5,14,000/- ಆಗಿದೆ ಎಂದು ಅಂದಾಜಿಸಲಾಗಿದೆ.
Follow us on Social media