ಬೆಳಗಾವಿ: ಮನೆಗೆ ವಾಪಾಸಾಗುವ ವೇಳೆ ಪಂಢರಿ ನದಿ ಪ್ರವಾಹದಲ್ಲಿ ಸಿಲುಕಿದ್ದ 60 ವರ್ಷದ ರೈತನನ್ನು ಪೊಲೀಸರು ನುರಿತ ಈಜುಗಾರರ ಸಹಾಯದಿಂದ ರಕ್ಷಿಸಿದ್ದಾರೆ.
ಖಾನಾಪುರ ತಾಲೂಕಿನ ಕಾಪೋಳಿ ಗ್ರಾಮದ ವಿಲಾಸ್ ದತ್ತಾತ್ರೇಯ ದೇಸಾಯಿ ಪ್ರವಾಹದಲ್ಲಿ ಸಿಲುಕಿದ್ದ ರೈತ. ತಮ್ಮ ಹೊಲದಿಂದ ವಾಪಾಸಾಗುತ್ತಿದ್ದ ವೇಳೆ ಸಿಂದೋಳಿ ಸಮೀಪ ಪಂಡರಿ ನದಿ ಪ್ರವಾಹದಲ್ಲಿ ಸಿಲುಕಿದ್ದ, ಇದ್ದಕ್ಕಿದ್ದಂತೆ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿತ್ತು.
ನದಿ ದಾಟುತ್ತಿದ್ದ ವೇಳೆ ನದಿಯ ಭಾರೀ ನೀರಿನಿಂದಾಗಿ ಆತ ಕೊಚ್ಚಿಹೋಗುತ್ತಿದ್ದ. ಅದೃಷ್ಟವಶಾತ್ ಆತ ಮರದ ಕೊಂಬೆಯೊಂದನ್ನು ಹಿಡಿದುಕೊಂಡು ನಂತರ ಮರವೇರಿ ತನ್ನನ್ನು ರಕ್ಷಿಸುವಂತೆ ಕೂಗಿಕೊಂಡಿದ್ದ.
ಆತನನ್ನು ನೋಡಿದ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದ್ದಾರೆ.
Follow us on Social media