ಬೆಳಗಾವಿ : ರಮೇಶ್ ಜಾರಕಿಹೊಳಿ ಅವರ ಬಳಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ದಾಖಲೆಗಳಿದ್ದರೆ ಶೀಘ್ರ ಬಿಡುಗಡೆ ಮಾಡಲಿ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ದಾಖಲೆ ಇದೆ ಎನ್ನುತ್ತಾ ಕಾಯಿಸುವುದಾಗಲೀ, ಧಾರವಾಹಿ ತರ ಎಳೆಯುವುದಾಗಲೀ ಬೇಡ. ಅಂತಹ ಯಾವುದೇ ದಾಖಲೆ ಅವರ ಬಳಿ ಇದ್ದರೆ ತತ್‌ಕ್ಷಣ ಬಿಡುಗಡೆ ಮಾಡಲಿ ಎಂದರು.
ಸಂತೋಷ್ ಪಾಟೀಲ್ ಅವರ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಗೊಂದಲ ಹೆಚ್ಚಿದೆ. ಕೆಲವರು ಆತ ನಮ್ಮ ಕಾರ್ಯಕರ್ತನೇ ಅಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಮೊದಲಿನಿಂದಲೂ ಆತ ನಮ್ಮೊಂದಿಗಿದ್ದ ಎನ್ನುತ್ತಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಮತ್ತು ರಮೇಶ್ ಜಾರಕಿಹೊಳಿ ಅವರು ಕಾಮಗಾರಿ ನಡೆದಿದೆ ಎನ್ನುತ್ತಾರೆ. ಯಾರಲ್ಲಿಯೂ ಸ್ಪಷ್ಟ ಉತ್ತರ ಇಲ್ಲದಾಗಿದೆ ಎಂದವರು ಆಪಾದಿಸಿದರು.
Follow us on Social media