ಬೆಂಗಳೂರು : ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ದೂರು ದಾಖಲಾಗಿದೆ.
ಚೆನ್ನೈನಿಂದ ರಾತ್ರಿ 10 ಗಂಟೆಗೆ ಟೇಕ್ ಆಫ್ ಆದ ಇಂಡಿಗೋ ವಿಮಾನ 6E 6225 ಚೆನ್ನೈ-ಬೆಂಗಳೂರು ವಿಮಾನದಲ್ಲಿ ಏಪ್ರಿಲ್ 18 ರಂದು 27 ವರ್ಷದ ಮಹಿಳೆಗೆ ಸಂಚರಿಸುತ್ತಿದ್ದರು. ಈ ವೇಳೆ ಅದೇ ವಿಮಾನದಲ್ಲಿದ್ದ ಪುರುಷ ಸಹ ಪ್ರಯಾಣಿಕ ಮಹಿಳೆಯ ಎದೆಯನ್ನು ಹಿಡಿದುಕೊಂಡಿದ್ದಾನೆ. ಈ ವೇಳೆ ಆತನನ್ನು ಎಚ್ಚರಿಸಿದರೂ ಆತ ಕೇಳದೇ ಮೂರ್‍ನಾಲ್ಕು ಬಾರಿ ಯಥಾ ಪ್ರಕಾರ ಕಿರುಕುಳ ನೀಡಿದ್ದಾನೆ.
ಆ ಬಳಿಕ ವಿಮಾನ ಸಿಬಂದಿ ಗಮನಕ್ಕೆ ಈ ವಿಚಾರವನ್ನು ತರಲಾಯಿತು ಎಂದು ಆಕೆ ಅಂತಾರಾಷ್ಟ್ರೀಯ ಪೊಲೀಸ್ ಠಾಣೆಯಲ್ಲಿನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಆಕೆ ಪೊಲೀಸ್ ದೂರು ನೀಡಿದ್ದಾರೆ.ಆರೋಪಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದನ್ನು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ನೋಡಿದ್ದಾರೆ ಮತ್ತು ಸಂಬಂಧಿಸಿದ ಸಾಕ್ಷ್ಯವನ್ನು ವಿಮಾನ ಸಿಬಂದಿಗೆ ಅವರು ನೀಡಿದ್ದಾರೆ ಎನ್ನಲಾಗಿದೆ.ಮಹಿಳೆ ನೀಡಿದ ದೂರಿನಂತೆ ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಂಕಿತ ವ್ಯಕ್ತಿಯನ್ನು ಚೆನ್ನೈನ ಕೋಡಂಬಾಕ್ಕಂ ನಿವಾಸಿ 30 ವರ್ಷದ ಸೇಲ್ಸ್‌ಮ್ಯಾನ್ ಎಂದು ಗುರುತಿಸಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
Follow us on Social media