ಬೆಂಗಳೂರು : ಮಹಿಳೆಯನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಭೂಸಂದ್ರ ಗ್ರಾಮದಲ್ಲಿ ನಡೆದಿದೆ.
ಶ್ರುತಿ (29)ಯನ್ನು ಕೊಲೆಯಾದ ಮಹಿಳೆಯಾಗಿದ್ದಾಳೆ.
ಪತಿಯೇ ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಬೆಸ್ಕಾಂ ಉದ್ಯೋಗಿಯಾಗಿರುವ ಪತಿ ಕೃಷ್ಣಮೂರ್ತಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ.
ಕೃಷ್ಣಮೂರ್ತಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ನಿನ್ನೆಯೂ ಪತಿಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಡಿ ಹೆಂಡತಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ.
ಬಳಿಕ ಆಕೆ ಗಂಭೀರವಾಗಿರುವುದನ್ನು ಗಮನಿಸಿ ಬಳಿಕ ಪರಾರಿಯಾಗಿದ್ದಾನೆ.
Follow us on Social media