ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಲಯ ಕಛೇರಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅಮೃತಹಳ್ಳಿಯ ಮುಂಭಾಗದ ರಸ್ತೆಯಲ್ಲಿ ವಿಶ್ವನಾಥ್ ಬಿನ್ ಮರಿಗೌಡ, ನರಸಮ್ಮ ಕೋಂ ಲೇಟ್ ಅಣ್ಣಯ್ಯಪ್ಪ ಇವರು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮದ್ಯದ ದಾಸ್ತಾನು ಸಾಗಾಣಿಕೆ ಮಾಡಿದ್ದರು.
ಈ ಸಂದರ್ಭದಲ್ಲಿ ಗಸ್ತು ಕಾರ್ಯದಲ್ಲಿದ್ದ ಬೆಂಗಳೂರು ನಗರ ಜಿಲ್ಲೆ ಉತ್ತರ ವಲಯದ ಅಬಕಾರಿ ಉಪ ಆಯುಕ್ತ ಪಿ.ಎಸ್.ಶ್ರೀನಾಥ್ ಮತ್ತು ಯಶವಂತಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಜಿ.ವಿವೇಕ್ ಅವರ ಮಾರ್ಗದರ್ಶನದಂತೆ ಗಸ್ತು ಕಾರ್ಯದಲ್ಲಿದ್ದಾಗ ಸುಮಾರು 1.22 ಲಕ್ಷದ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಸಾಗಾಣಿಕೆ ಮಾಡುತ್ತಿದ್ದ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನ ಮತ್ತು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
Source : UNI
Follow us on Social media