ಬೆಂಗಳೂರು : ಬಾಣಸವಾಡಿ ಪೊಲೀಸರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಆಫ್ರಿಕಾ ಮೂಲದ ನಮ್ಯುಟೆಬಿ ಶಮ್ರಿಯಾ ಮತ್ತು ನನ್ಫುಕಾ ಫಿಯೊನ ಎಂದು ಗುರುತಿಸಲಾಗಿದೆ.ಪೊಲೀಸರು ಬಂಧಿತರಿಂದ 1.5 ಲಕ್ಷ ಮೌಲ್ಯದ ಮಾದಕ ವಸ್ತು 2 ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.ಇನ್ನು 2020ರಲ್ಲಿ ಟೂರಿಸ್ಟ್ ವಿಸಾದಡಿ ಬಂದಿದ್ದ ಎ1 ಆರೋಪಿ. 2021ರಲ್ಲಿ ಮೆಡಿಕಲ್ ವೀಸಾದಡಿ ಬಂದಿದ್ದ ಎ2 ಆರೋಪಿ.
ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಭಾರತದಲ್ಲಿ ವಾಸಿಸ್ತಿದ್ದರು ಎನ್ನಲಾಗಿದೆ.ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Follow us on Social media