ಬೆಂಗಳೂರು : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಶರ್ಟ್ ತೆಗೆಯುವಂತೆ ಹೇಳಿ ಭದ್ರತಾ ಸಿಬ್ಬಂದಿಯೋರ್ವರು ಮಹಿಳೆಗೆ ಮುಜುಗುರು ಆಗುವಂತೆ ವರ್ತಿಸಿದ್ದಾರೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಂಗೀತಗಾರ್ತಿಯೊಬ್ಬರು ಈ ಬಗ್ಗೆ ಆರೋಪಿಸಿದ್ದು, ‘ನಿಜವಾಗಿಯೂ ಇದು ಅವಮಾನಕರ’ ಅನುಭವ. ‘ಮಹಿಳೆಯರೇಕೆ ಬಟ್ಟೆ ಬಿಚ್ಚಬೇಕು’ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಶರ್ಟ್ ತೆಗೆಯುವಂತೆ ಹೇಳಿದ್ದಾಗಿ ಸಂಗೀತಗಾರ್ತಿಯೊಬ್ಬರು ಆರೋಪಿಸಿದ್ದು, ‘ನಿಜವಾಗಿಯೂ ಇದು ಅವಮಾನಕರ’ ಅನುಭವ. ‘ಮಹಿಳೆಯರೇಕೆ ಬಟ್ಟೆ ಬಿಚ್ಚಬೇಕು’ ಎಂದು ತಮ್ಮ ಟ್ವಿಟರ್ ಖಾತೆ ಮೂಲಕ ಪ್ರಶ್ನಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ವೇಳೆ ನನಗೆ ಸಿಬ್ಬಂದಿ ಶರ್ಟ್ ತೆಗೆಯುವಂತೆ ಸೂಚಿಸಿದರು. ಸಿಬ್ಬಂದಿಯ ಈ ವರ್ತನೆಯಿಂದ ನನಗೆ ಬಹಳ ಮುಜುಗರ ಹಾಗೂ ಅವಮಾನವಾಗಿದೆ.
ಕೇವಲ ಕ್ಯಾಮಿಸೋಲ್ (ಮಹಿಳೆಯರು ಧರಿಸುವ ಉಡುಪು) ಧರಿಸಿ ಭದ್ರತಾ ಪರಿಶೀಲನೆ ಕೇಂದ್ರದ ಬಳಿ ನಿಂತು ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ರೀತಿಯ ವರ್ತನೆಗಳನ್ನು ಎದುರಿಸುವುದು ಅವಮಾನಕರ ಸಂಗತಿಯಾಗಿದೆ.
ಭದ್ರತಾ ಪರಿಶೀಲನೆ ವೇಳೆ ಮಹಿಳೆಯರು ಶರ್ಟ್ ನ್ನು ಏಕೆ ತೆಗೆಯಬೇಕು? ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿ ಮಹಿಳೆ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಘಟನೆ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ವಿಮಾನ ನಿಲ್ದಾಣದ ಭದ್ರತೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿರ್ವಹಿಸುತ್ತದೆ.
ಕಾರ್ಯಾಚರಣೆ ಮತ್ತು ಭದ್ರತಾ ತಂಡಗಳಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮಹಿಳೆಯ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದು “ಇದು ಸಂಭವಿಸಬಾರದಿತ್ತು” ಎಂದು ಹೇಳಿದೆ.
ಈ ಟ್ವೀಟ್ ನಲ್ಲಿ ಮಹಿಳೆ ತಾನು ಪ್ರಯಾಣಿಸಿದ ವಿಮಾನ ಸಂಸ್ಥೆಯ ಹೆಸರು. ಪ್ರಯಾಣಿಸಬೇಕಿದ್ದ ಸ್ಥಳ, ಪ್ರಯಾಣದ ದಿನಾಂಕ ಸೇರಿದಂತೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸಲು ಸಮಸ್ಯೆಯಾಗಬಹುದು ಎಂದಿದ್ದಾರೆ.
Follow us on Social media