ಬೆಂಗಳೂರು: ಬೀದರ್ ನಲ್ಲಿ ಏಳು ಸೇರಿ ರಾಜ್ಯದಲ್ಲಿ ಸೋಮವಾರ ಸಂಜೆ ಮತ್ತೆ ಒಂಬತ್ತು ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ಕರ್ನಾಟಕದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 651ಕ್ಕೆ ಏರಿಕೆಯಾಗಿದೆ.
ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ರಾಜ್ಯದಲ್ಲಿ ಮತ್ತೆ 37 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ದಾವಣಗೆರೆಯಲ್ಲಿ ವರದಿಯಾಗಿದ್ದ 21 ಪ್ರಕರಣ ಕೈಬಿಟ್ತರೂ ಇಂದು ಹೊಸದಾಗಿ 16 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಪೈಕಿ ದಾವಣಗೆರೆಯಲ್ಲಿ ಒಂದು, ಬೀದರ್ 07, ಬೆಂಗಳುರು ನಗರದಲ್ಲಿ ಒಂದು ಪ್ರಕರಣ ಸಂಜೆ ವೇಳೆಗೆ ದೃಢಪಟ್ಟಿದೆ. ಬೆಂಗಳುರು ನಗರದ 40 ವರ್ಷದ ಪುರುಷನಲ್ಲಿ ಕೊರೋನಾ ಇರುವುದು ಪತ್ತೆಯಾಗಿದೆ.
ಬೀದರ್ ನ ನಿವಾಸಿ 35, 46, 50 72 ವರ್ಷದ ನಾಲ್ವರು ಮಹಿಳೆಯರು, 16 ವರ್ಷದ ಬಾಲಕ, 22 ವರ್ಷದ ಯುವಕ, 60 ಹಾಗೂ 40 ವರ್ಷದ ಪುರುಷರಿಗೆ ಸೋಂಕು ಕಾಣಿಸಿಕೊಂಡಿದೆ.
ಕಲಬುರಗಿಯಲ್ಲಿ 56 ವರ್ಷದ ಪುರುಷ, ದಾವಣಗೆರೆಯ 48 ವರ್ಷದ ಮಹಿಳೆ (ರೋಗಿ 651) ಸಾವನ್ನಪ್ಪಿದ್ದು ಒಟ್ಟೂ ಸಾವಿನ ಸಂಖ್ಯೆ 27ಕ್ಕೆ ತಲುಪಿದೆ. ಇತ್ತೀಚಿನ ವರದಿಯಂತೆ ಬೀದರ್ ನಲ್ಲಿ ಸಹ ಓರ್ವ ಮಹಿಳೆ ಕೊರೋನಾಗೆ ಬಲಿಯಾಗಿದ್ದು ಒಟ್ತಾರೆ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ತಲುಪಿದೆ.
Follow us on Social media