ಚೆನ್ನೈ: ಕೊರೋನಾ ಸೋಂಕಿನ ಆರ್ಥಿಕ ಹೊಡೆತ ದೇಶದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೂ ತಟ್ಟಿದೆ. ಇದರ ಬಹುತೇಕ ಅಂಪೈರ್ ಗಳು ಮತ್ತು ಪಂದ್ಯಗಳ ಅಧಿಕಾರಿಗಳಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ 3 ತಿಂಗಳ ವೇತನ ನೀಡಬೇಕಿದೆ.
ಇಲ್ಲಿ ಕೆಲವರಿಗೆ ಮಾತ್ರ ಜನವರಿ ತಿಂಗಳ ವೇತನ ಸಿಕ್ಕಿದೆ. ಕೋವಿಡ್ 19 ಬಿಕ್ಕಟ್ಟಿನಿಂದಾಗಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿರುವ ಕೇಂದ್ರ ಕಚೇರಿ ಮುಚ್ಚಿದೆ.
ಪಂದ್ಯ ಆಯೋಜನೆಯಾಗುವ ಸಂದರ್ಭದಲ್ಲಿ ಬಿಸಿಸಿಐ ನಿಯಮ ಪ್ರಕಾರ ಅಂಪೈರ್ ಗಳು ಮತ್ತು ಪಂದ್ಯದ ಅಧಿಕಾರಿಗಳು ತಮಗೆ ಬರಬೇಕಾದ ವೇತನ ಅಥವಾ ಸಂಭಾವನೆಗೆ ಅರ್ಜಿ ಸಲ್ಲಿಸಬೇಕು. ಇದಕ್ಕೆ ಅನುಮೋದನೆ ಸಿಕ್ಕಿದ ನಂತರ ಬಿಸಿಸಿಐ ಆನ್ ಲೈನ್ ನಲ್ಲಿ ಎರಡು ವಾರಗಳಲ್ಲಿ ಹಣವನ್ನು ವರ್ಗಾವಣೆ ಮಾಡುತ್ತದೆ.
ಆದರೆ ಮಾರ್ಚ್ ತಿಂಗಳಲ್ಲಿ ನಡೆದ ಪಂದ್ಯಗಳಿಗೆ ಸಂಭಾವನೆ ಸಿಕ್ಕಿಲ್ಲ. ಗ್ರೂಪ್ ಎಯಲ್ಲಿ 20 ಅಂಪೈರ್ ಗಳಿದ್ದು ಅವರಲ್ಲಿ ನಾಲ್ವರು ಐಸಿಸಿ ಅಂಪೈರ್ ಗಳು ಮತ್ತು ನಾಲ್ವರು ಮಾಜಿ ಐಸಿಸಿ ಅಂಪೈರ್ ಗಳಿದ್ದಾರೆ. ಅವರಿಗೆ ಪ್ರತಿದಿನಕ್ಕೆ 40 ಸಾವಿರ ರೂಪಾಯಿ ವೇತನ. ಉಳಿದ 120 ಅಂಪೈರ್ ಗಳು ಮತ್ತು ಮ್ಯಾಚ್ ರೆಫ್ರಿಗಳು ಸೇರಿದಂತೆ 70 ಪಂದ್ಯದ ಅಧಿಕಾರಿಗಳು ದಿನಕ್ಕೆ 30 ಸಾವಿರ ಪಡೆಯುತ್ತಾರೆ. ಈ ವೇತನ ಅಥವಾ ಸಂಭಾವನೆ ದರ ಎಲ್ಲಾ ಪಂದ್ಯಗಳಿಗೆ ಒಂದೇ ರೀತಿಯಿರುತ್ತದೆ.
Follow us on Social media