ಬೆಳ್ತಂಗಡಿ : ರಾಜ್ಯದೆಲ್ಲೇಡೆ ಮಳೆರಾಯನ ಆರ್ಭಟ ಜೋರಾಗಿದ್ದು ಹಲವೆಡೆ ಪ್ರಕೃತಿ ವಿಕೋಪಗಳು ಉಂಟಾಗುತ್ತಿದ್ದು, ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234 ರ ಮಧ್ಯ ಅಲೇಖಾನ್ ಸಮೀಪ ಘಾಟ್ ರಸ್ತೆ ಬಿರುಕು ಬಿಟಿದ್ದು ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಚಾರ್ಮಡಿ ಘಾಟಿಯ ಅಲ್ಲಲ್ಲಿ ಕೆಲವೆಡೆ ಭಾರಿ ಮಳೆಯಿಂದ ಗುಡ್ಡ ಕುಸಿತವಾಗುತ್ತಿದೆ. ಇಂದು ಬೆಳಗ್ಗೆ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿದ್ದರಿಂದ ಸಂಚಾರ ಸ್ಥಿತವಾಗಿತ್ತು, ನಂತರ ತೆರವು ಕಾರ್ಯ ಪೂರ್ಣಗೊಳಿಸಿದ್ದು, ಇದೀಗ ಅಲೇಖಾನ್ ರಸ್ತೆ ಬಿರುಕಿನಿಂದ ಮತ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಂಡು ಬಂದ ಹಿನ್ನಲೆ ಮುನ್ನಚ್ಚೆರಿಕಾ ಕ್ರಮವಾಗಿ ಘಾಟ್ ನಲ್ಲಿ ರಸ್ತೆ ಸಂಚಾರ ಸ್ಥಗಿತ ಮಾಡಲಾಗಿದೆ. ಚಾರ್ಮಾಡಿ ಚೆಕ್ ಪೋಸ್ಟ್, ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಂದ್ ಮಾಡಲಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ.
Follow us on Social media