ಮುಂಬಯಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಸಾವಿನ ವಿಷಯವನ್ನು ಅವರ ಸಹೋದರ ರಣದೀರ್ ಕಪೂರ್ ಖಚಿತ ಪಡಿಸಿದ್ದಾರೆ.
ಕುಟುಂಬದ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಹೋದಾಗ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆಗ ತಮಗೆ ಇನ್ಫೆಕ್ಷನ್ ಆಗಿತ್ತು ಎಂದು ತಿಳಿಸಿದ್ದರು. ಮುಂಬೈಗೆ ಮರಳಿದ ಬಳಿಕ ವೈರಲ್ ಜ್ವರದ ಕಾರಣ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿ ಬಹಳ ಬೇಗ ಬಿಡುಗಡೆಯಾಗಿದ್ದರು.
ಸುಮಾರು ಒಂದು ವರ್ಷದ ಹಿಂದೆ ಯುಎಸ್‍ನಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಸ್ವದೇಶಕ್ಕೆ ಆಗಮಿಸಿದ್ದರು. ಫೆಬ್ರವರಿಯಲ್ಲಿ ಎರಡು ಸಲ ಆಸ್ಪತ್ರೆಗೆ ದಾಖಲಾಗಿದ್ದರು. ರಿಷಿ ಕಪೂರ್ ಸಾವಿಗೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಿಷಿ ಕಪೂರ್ ಆಪ್ತ ಅಮಿತಾಭ್ ಬಚ್ಚನ್ ತೀವ್ರ ಬೇಸರಗೊಂಡಿರುವುದಾಗಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
7 ವರ್ಷದ ರಿಷಿ ಕಪೂರ್ಗೆ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಬುಧವಾರ ಅವರ ಆರೋಗ್ಯದಲ್ಲಿ ಏರುಪೇರು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಿಷಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
Follow us on Social media