ನವದೆಹಲಿ: ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಅವರು ಜುಲೈ 31ರಿಂದ ಜಾರಿಗೆ ಬರುವಂತೆ ಬಜಾಜ್ ಫೈನಾನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸುಮಾರು ಮೂರು ದಶಕಗಳ ಕಾಲ ಕಂಪನಿಯ ಚುಕ್ಕಾಣಿ ಹಿಡಿದಿದ್ದ ರಾಹುಲ್ ಬಜಾಜ್ ಅವರು ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಜಾಜ್ ಫೈನಾನ್ಸ್ ಉಪಾಧ್ಯಕ್ಷರಾಗಿರುವ ಸಂಜೀವ್ ಬಜಾಜ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬಜಾಜ್ ಫೈನಾನ್ಸ್ ತಿಳಿಸಿದೆ.
1987ರಲ್ಲಿ ಬಜಾಜ್ ಫೈನಾನ್ಸ್ ಪ್ರಾರಂಭವಾದಾಗಿನಿಂದ ಕಂಪನಿಯ ಚುಕ್ಕಾಣಿ ಹಿಡಿದಿದ್ದ ರಾಹುಲ್ ಬಜಾಜ್ ಅವರು ಇನ್ನುಮುಂದೆ ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.
2020, ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸಂಜೀವ್ ಬಜಾಜ್ ಅವರನ್ನು ನೇಮಕ ಮಾಡಲು ಕಂಪನಿಯ ನಿರ್ದೇಶಕ ಮಂಡಳಿ ಅನುಮೋದನೆ ನೀಡಿದೆ.
Follow us on Social media