ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸೂರಿ ಕುಮೇರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಫಘಾತ ಸಂಭವಿಸಿದೆ. ಟ್ಯಾಂಕರ್ ಹಾಗೂ ತೂಪಾನ್ ವ್ಯಾನ್ ನಡುವೆ ಗುರುವಾರ ಸಂಜೆ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ತೂಪಾನ್ ಚಾಲಕ ಗಂಭೀರ ಗಾಯಗಂಡಿದ್ದು ತೂಪಾನ್ ಚಾಲಕನ ಸೇರಾ ನಿವಾಸಿ ಸುರೇಂದ್ರ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ತೂಪಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸೇರದಲ್ಲಿರುವ ಗೇರು ಬೀಜದ ಪ್ಯಾಕ್ಟರಿಗೆ ಬರುವ ಕೆಲಸಗಾರರನ್ನು ಮನೆಗೆ ಬಿಟ್ಟು ಬರುವ ವೇಳೆ ಅಪಘಾತ ಸಂಭವಿಸಿದೆ.
ರಸ್ತೆ ಕಾಮಗಾರಿ ನಡೆಯುತ್ತಿದ್ದು ರಸ್ತೆಯೇ ಕಾಣುತ್ತಿಲ್ಲ. ಒಂದು ಕಡೆ ಧಾರಾಕಾರವಾಗಿ ಸುರಿಯುವ ಮಳೆ ಇನ್ನೊಂದು ಕಡೆ ರಸ್ತೆ ಕಾಮಗಾರಿಯ ಅವಾಂತರ ಈ ಅಪಘಾತಕ್ಕೆ ಕಾರಣ ಎಂದು ವಿಶ್ಲೇಶಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆಯುವ ಅಪಘಾತ ಗಳಿಗೆ ರಸ್ತೆಯ ಅವಾಂತರವೇ ಕಾರಣವೆನ್ನಲಾಗಿದೆ. ವಿಟ್ಲ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಲಾಗಿದೆ.
Follow us on Social media