ಬಂಟ್ವಾಳ : ಸಾಲ ಮರುಪಾವತಿಸಲು ಸಾಧ್ಯವಾಗದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಇಡಿದು ಎಂಬಲ್ಲಿ ನಡೆದಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಸಂಜೀವ ಪೂಜಾರಿ(75) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಈ ಕುರಿತು ಅವರ ಪುತ್ರ ನವೀನ್ ಎಂಬಾತ ವಿಟ್ಲ ಪೊಲೀಸರಿಗೆ ನೀಡಿದ್ದು, ಸಂಜೀವ ಪೂಜಾರಿ ಸಹಕಾರಿ ಸಂಘದಿಂದ ಸಾಲವನ್ನು ತೆಗೆದುಕೊಂಡಿದ್ದು, ಸಾಲವನ್ನು ಮರುಪಾವತಿಸುವಂತೆ ನೋಟೀಸ್ ಕಳುಹಿಸಿರುತ್ತಾರೆ.ಕೃಷಿ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದ ಕಾರಣ ಸಾಲ ಬಾದೆಯಿಂದ ಬೇಸರಗೊಂಡು ಮಾನಸಿಕವಾಗಿ ನೊಂದು ಸಾಯುವ ಉದ್ದೇಶದಿಂದ ಜುಲೈ 14ರಂದು ಸಂಜೆ ಸುಮಾರು 5 ಗಂಟೆಗೆ ಬಂಟ್ವಾಳ ತಾಲೂಕು ಮೈಕೆ ಎಂಬಲ್ಲಿಯ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದು, ಭಾವ ಶೇಖರ ಪೂಜಾರಿ ಹಾಗೂ ಇತರರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಂಜೆ 7 ಗಂಟೆಗೆ ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.