ಬಂಟ್ವಾಳ : ಶಾಲಾ ಬಾಲಕಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ನಿವಾಸಿಪುಟ್ಟರಾಜ್ ಅವರ ಮಗಳು ಕಲ್ಲಡ್ಕದ ಅಮ್ಟೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ ಪೃಥ್ವಿ (12) ಕಾಣೆಯಾದ ಬಾಲಕಿ.ಪುಟ್ಟರಾಜ್ ಅವರ ಮಗಳು ಪೃಥ್ವಿ ಯನ್ನು ವಿದ್ಯಾಭ್ಯಾಸ ದ ಸಲುವಾಗಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು.ಕಲ್ಲಡ್ಕ ದ ಅಮ್ಟೂರು ನಿವಾಸಿ ಸಂಬಂಧಿಕ ರಾಜಪ್ಪ ಅವರ ಮನೆಯಲ್ಲಿ ಬಾಲಕಿ ವಾಸವಾಗಿದ್ದು ಅಲ್ಲಿಂದ ಶಾಲೆಗೆ ಹೋಗಿ ಬರುತ್ತಿದ್ದಳು.ಇಂದು ಕೂಡ ಮನೆಯಿಂದ ರಿಕ್ಷಾದಲ್ಲಿ ಶಾಲೆಗೆ ಹೋಗಿದ್ದಳು.ಆದರೆ ಬಾಲಕಿ ಶಾಲೆಗೆ ಬಾರದೆ ಇದ್ದುದರಿಂದ ಶಾಲಾ ಶಿಕ್ಷಕಿ ಮನೆಯವರಿಗೆ ಪೋನ್ ಮಾಡಿ ತಿಳಿಸಿದ್ದಾರೆ.ಶಾಲೆಗೆಂದು ಹೋದವಳು ಶಾಲೆಗೆ ಹೋಗದೆ ಕಾಣೆಯಾದ ಬಗ್ಗೆ ಗಾಬರಿಗೊಂಡ ಪೋಷಕರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.