ಬಂಟ್ವಾಳ: ಭಾರತ-ಬಾಂಗ್ಲಾ ಮತ್ತು ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ ನಿವೃತ ಸೈನಿಕ ಪಾಸ್ಕಲ್ ದಾಂತಿಸ್ ಅವರು ಮೇ.23ರಂದು ನಿಧನ ಹೊಂದಿದರು.
ಪಾಸ್ಕಲ್ ದಾಂತಿಸ್(78) ನಿವೃತ್ತ ಸೈನಿಕ, ಪ್ರಗತಿಪರ ಕೃಷಿಕ ಇವರು ಮೂಡುಪಡುಕೋಡಿ ಗ್ರಾಮದ ಪಾಡಿ ನಿವಾಸಿಯಾಗಿದ್ದು, ಅಸೌಖ್ಯದಿಂದ ಮನೆಯಲ್ಲೇ ನಿಧನ ಹೊಂದಿದರು.
ಮೃತರು ಪತ್ನಿ, ನಿವೃತ್ತ ಮುಖ್ಯ ಶಿಕ್ಷಕಿ ರೆನ್ನಿ ಪಾಯ್ಸ್ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಪಾಸ್ಕಲ್ ಅವರು ವಾಯುದಳದಲ್ಲಿ 15ವರ್ಷ ಸೇವೆ ಸಲ್ಲಿಸಿದ್ದರು.
1971ರಲ್ಲಿ ನಡೆದ ಭಾರತ-ಬಾಂಗ್ಲಾ ಮತ್ತು ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅವರು ಭಾಗವಹಿಸಿದ್ದರು.
ಬಳಿಕ 1979ರಲ್ಲಿ ನಿವೃತ್ತಿ ಹೊಂದಿದ್ದರು. ಅವರ ಸೇವೆಯನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಸನ್ಮಾನಿಸಿವೆ.
ಸೇನೆಯಲ್ಲಿ ನಿವೃತ್ತಿ ಹೊಂದಿದ ಬಳಿಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ್ಡಿದ್ದರು.
ಇದೀಗ ಅವರು ಕೊನೆಯುಸಿರೆಳೆದಿದ್ದು ಅವರ ಅಂತಿಮ ಯಾತ್ರೆ ಬುಧವಾರ ಮಧ್ಯಾಹ್ನ 3.30 ಕ್ಕೆ ನಡೆಯಲಿದ್ದು, 4 ಗಂಟೆಗೆ ವಗ್ಗ, ನೀರ್ಖಾನ ಚರ್ಚ್ ನಲ್ಲಿ ಬಲಿಪೂಜೆ ನಡೆಯಲಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.
Follow us on Social media