ಬಂಟ್ವಾಳ : ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇಲ್ಲಿಯ ತನಕ ಸುಮಾರು 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಈ ಕುರಿತಂತೆ ಡಾ. ನವೀನ್ ಚಂದ್ರ ಕುಲಾಲ್ ಮಂಗಳೂರು ಅವರು ಮಾಹಿತಿ ನೀಡಿದ್ದಾರೆ. ಕಣ್ಣುಮುಚ್ಚಾಳೆಯ ಆಟದಂತೆ ಸುರಿಯುವ ಮಳೆಗೆ ಹಾಗೂ ಅಜಾಗರೂಕತೆಯ ಕಾರಣದಿಂದಾಗಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆಯ ಸುತ್ತ ಮುತ್ತ ಸಾರ್ವಜನಿಕರು ನೀರು ನಿಲ್ಲದಂತೆ ಕ್ರಮ ವಹಿಸಬೇಕಾಗಿದ್ದು, ಇದರಿಂದಾಗಿ ಡೆಂಗ್ಯು ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಅನಾರೋಗ್ಯ ಸಂದರ್ಭ ನಿರ್ಲಕ್ಷ್ಯ ವಹಿಸದೆ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುಉದ್ ಅಗತ್ಯವಾಗಿದೆ.
Follow us on Social media