ನವದೆಹಲಿ: ಕೊರೋನಾವೈರಸ್ ಸೋಂಕಿನಿಂದ ಬಳಲುತ್ತಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಫ್ಲಾಸ್ಮಾ ಥೆರಸಿ ಚಿಕಿತ್ಸೆ ನೀಡಿದ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ದೆಹಲಿ ಆರೋಗ್ಯ ಸಚಿವಾಲಯ ಕಾರ್ಯಾಲಯ ಭಾನುವಾರ ತಿಳಿಸಿದೆ.
ಸತ್ಯೇಂದರ್ ಜೈನ್ ಅವರನ್ನು ಫ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಒಳಪಡಿಸಿದ ನಂತರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಜ್ವರ ಕಡಿಮೆಯಾಗಿದೆ. ಆಮ್ಲಜನಕದ ಮಟ್ಟ ಪ್ರಗತಿಯಾಗಿದೆ. ನಾಳೆ ಅವರನ್ನು ಜನರಲ್ ವಾರ್ಡಿಗೆ ಸ್ಥಳಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ಆರೋಗ್ಯ ಇಲಾಖೆ ಹೊಣೆ ಹೊತ್ತಿರುವ ಸತ್ಯೇಂದರ್ ಜೈನ್ ಅವರಿಗೆ ಕೋವಿಡ್-19 ಸೋಂಕು ತಗುಲಿದ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಸಾಕೇತ್ ನಲ್ಲಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಫ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗಿದೆ.
ಶುಕ್ರವಾರ ಜೈನ್ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿದ್ದರಿಂದ ಆಕ್ಸಿಜನ್ ನೆರವಿನೊಂದಿಗೆ ಅವರನ್ನು ಇರಿಸಲಾಗಿತ್ತು.ಶ್ವಾಸಕೋಶದಲ್ಲಿ ಸೋಂಕಿನ ಪ್ರಮಾಣ ತೀವ್ರಗೊಂಡು ಆಕ್ಸಿಜನ್ ನೆರವಿನಲ್ಲಿ ನಿಗಾ ವಹಿಸಲಾಗಿತ್ತು. ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಜೂನ್ 15 ರಂದು ಈಶಾನ್ಯ ದೆಹಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಜೈನ್ ಅವರಿಗೆ ಜೂನ್ 17 ರಂದು ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿತ್ತು.
Follow us on Social media